ಕರ್ನಾಟಕದಲ್ಲಿ ತೃತೀಯ ಲಿಂಗಿಗಳು KSRP & IRB ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ವಿಶೇಷ ಮೀಸಲು ಪಡೆಯ 70 ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಮಂಗಳಮುಖಿಯರ ನೇಮಕಕ್ಕೆ ಅವಕಾಶ ನೀಡಿದ್ದು, ಪೊಲೀಸ್ ಇಲಾಖೆಯ ಈ ಮಹತ್ವದ ಹೆಜ್ಜೆ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಸಮಾನ ಅವಕಾಶ ಕಲ್ಪಿಸಿದ ಹೆಗ್ಗಳಿಕೆಗೆ ಪೊಲೀಸ್ ಇಲಾಖೆ ಪಾತ್ರವಾಗಿದೆ.

ಡಿಸೆಂಬರ್ 20 ರಿಂದ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಪಡೆ (KSRP & IRB) ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಕ್ಕೆ ಅರ್ಜಿ ಸಲ್ಲಿಸಬಹುದು. 2022 ಜನವರಿ 18 ಅರ್ಜಿ ಸಲ್ಲಿಸಲು ಕೊನೆ ದಿನಾಂಕ. ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕ ಪಾವತಿಸಲು 2022 ಜ. 20 ಕೊನೆ ದಿನಾಂಕ ನಿಗದಿ ಪಡಿಸಲಾಗಿದೆ.

ಪ್ರಥಮ ಬಾರಿಗೆ ಮಂಗಳ ಮುಖಿಯರಿಗೆ ಅವಕಾಶ: ಇದೇ ಮೊದಲ ಭಾರಿಗೆ ಪೊಲೀಸ್ ಸೇವೆಗೆ ಸೇರಲು ಮಂಗಳ ಮುಖಿಯರಿಗೂ ಅವಕಾಶ ಕಲ್ಪಿಸಲಾಗಿದೆ. 

ವಯೋಮಿತಿ: 21 ವರ್ಷ, ಗರಿಷ್ಠ 40

ವಿದ್ಯಾರ್ಹತೆ:ಇನ್ನು ಕೆಎಸ್ಆರ್‌ಪಿ ಸಬ್‌ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವರು ಯಾವುದೇ ಅಂಗೀಕೃತ ವಿವಿಯಿಂದ ತತ್ಸಮಾನ ಪದವಿ ಪಡೆದಿರಬೇಕು. ಡಿಪ್ಲೋಮಾಗಳನ್ನು ಪದವಿ ಎಂದು ಅಂಗೀಕರಿಸಲಾಗದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.

Notification


By Priya

Leave a Reply

Your email address will not be published. Required fields are marked *