Join Our WhatsApp Group

 

Information Format :

 

Information Size : —

 

Number of Pages : —

 

Scanned Copy :

ಶ್ರೀ ಗವಿಸಿದ್ಧೇಶ್ವರ ಸ್ಪರ್ಧಾತ್ಮಕ ಪರೀಕ್ಷೆಗಳ ಗ್ರಂಥಾಲಯ
(ಡಿಜಿಟಲ್ ಲೈಬ್ರರಿ ಮತ್ತು 24 X 7 ನಿರಂತರ ಓದುವ ಕೊಠಡಿ)
ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಪ್ರವೇಶದ ನೊಂದಣಿ ಪ್ರಾರಂಭ

ಶ್ರೀ ಗವಿಸಿದ್ಧೇಶ್ವರ ಸ್ಪರ್ಧಾತ್ಮಕ ಪರೀಕ್ಷೆಗಳ ಗ್ರಂಥಾಲಯವು ಡಿಜಿಟಲ್ ಲೈಬ್ರರಿ ಮತ್ತು 24 x 7 ಓದುವ ಕೊಠಡಿಯು ವಿದ್ಯಾರ್ಥಿಗಳಿಗೆ ಸದಾ ಕಲಿಕೆಯ ವೇದಿಕೆಯಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಆಕಾಂಕ್ಷಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲು ಹಾಗೂ ತಮ್ಮ ಕನಸುಗಳನ್ನು ನನಸಾಗಿಸಲು ಈ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಬಳಕೆ ಮತ್ತು ಸೇವೆಯನ್ನು ಉಚಿತವಾಗಿ ನೀಡುವುದರ ಮೂಲಕ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್À ಈ ಕೊಡುಗೆಯನ್ನು ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ 2021ರ ಸಂದರ್ಭದಲ್ಲಿ ಸಾಂಕೇತಿಕವಾಗಿ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು.
ಈ ಗ್ರಂಥಾಲಯವನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅಧ್ಯಯನಕ್ಕಾಗಿ ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ. ವಿಶೇಷವಾಗಿ ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಮತ್ತು ಪೂರಕ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಈ ಗ್ರಂಥಾಲಯ ಡಿಜಿಟಲ್ ರೂಪದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರೀಕೃತ ಸಂಗ್ರಹವನ್ನು ಹೊಂದಿರುತ್ತದೆ. ಜೊತೆಗೆ ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪಠ್ಯ, ದೃಶ್ಯ ವಸ್ತು, ಆಡಿಯೋ ವಸ್ತು, ವಿಡಿಯೋ ಸಾಮಗ್ರಿಯನ್ನು ಎಲೆಕ್ಟ್ರಾನಿಕ್ ಮಾಧ್ಯಮ ಸ್ವರೂಪಗಳಾಗಿ ನೀಡುತ್ತದೆ.
ಪ್ರಸ್ಥುತ ಗ್ರಂಥಾಲಯದ ಸದುಪಯೋಗ ಪಡೆಯುವದಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಪ್ರವೇಶದ ನೊಂದಣಿಯನ್ನು ಪ್ರಾರಂಭಿಸಲಾಗಿದೆ. ಆಸಕ್ತರು ಈ ಕೆಳಗಿನ ಡಿಜಿಟಲ್ ಗ್ರಂಥಾಲಯದ https://forms.gle/nk4cvX58ZWgfNVWf8 ಲಿಂಕನ್ನು ಬಳಸಿ ಉಚಿತವಾಗಿ ನೊಂದಾಯಿಸಿಕೊಳ್ಳಬಹುದು ಅಥವಾ ಮಹಾವಿದ್ಯಾಲಯದ ವೆಬಸೈಟ್ http://www.sgcollegekoppal.com/ ಮುಖಾಂತರ ನೊಂದಾಯಿಸಿಕೊಳ್ಳಬಹುದು.
[ * ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶಿವಪ್ರಕಾಶ (ಸಹಾಯಕ ಗ್ರಂಥಾಲಯ ಅಧಿಕಾರಿ) 8553658271]

|| Register || 

Join Our WhatsApp Group


By Priya

Leave a Reply

Your email address will not be published. Required fields are marked *