ಲೆಕ್ಕಿಗರ ಹುದ್ದೆ ಭರ್ತಿ; ದಾವಣಗೆರೆ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಖಾಲಿ ಇರುವ ಲೆಕ್ಕಿಗರ ಹುದ್ದೆಯನ್ನು ಒಂದು ವರ್ಷದ ಅವಧಿಗೆ ಗೌರವಧನ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲು ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಅರ್ಜಿಗಳನ್ನು ಸಲ್ಲಿಸುವವರು ಬಿ.ಕಾಂ ಪದವಿ ಹೊಂದಿದ್ದು, ಅಂಕೌಂಟೆಂಟ್ ಹುದ್ದೆಯಲ್ಲಿ ಕನಿಷ್ಠ 5 ವರ್ಷಗಳ ಅನುಭವವಿರಬೇಕು. ಲೆಕ್ಕಪತ್ರದಲ್ಲಿ ಬ್ಯಾಂಕ್ ವ್ಯವಹಾರಗಳನ್ನು, ಸರ್ಕಾರದ ಲೆಕ್ಕಪತ್ರಗಳನ್ನು ತಯಾರಿಸುವ ಲೆಕ್ಕಪತ್ರಗಳಿಗೆ ಸಂಬಂಧಿಸಿದ ದಾಖಲೆ, ರಿಜಿಸ್ಟರ್‌ಗಳ ಕುರಿತು ಮಾಹಿತಿ ಹೊಂದಿರಬೇಕು. ಅಭ್ಯರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಶ್ ಮಾತನಾಡುವ ಹಾಗೂ ಬರೆಯಲು ಗೊತ್ತಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಟ್ಯಾಲಿ ತಂತ್ರಾಂಶ ಉಪಯೋಗಿಸುವ ಜ್ಞಾನ ಹಾಗೂ ಕೌಶಲ್ಯ ಮತ್ತು ಕಚೇರಿಯ ಪತ್ರ, ಲೆಕ್ಕಪತ್ರಗಳ ವ್ಯವಹಾರವನ್ನು ಗಣಕೀಕೃತದಲ್ಲಿ ನಮೂದಿಸಿ ಕೇಂದ್ರ ಕಚೇರಿಗೆ ಕಳುಹಿಸುವ ಕುರಿತು ಪರಿಣತಿ ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ 40 ವರ್ಷ ಮೀರಿರಬಾರದು. ಸ್ವವಿವರದ ಅರ್ಜಿಯ ಜೊತೆ ರೂ. 5 ಸ್ಟಾಂಪ್ ಹಚ್ಚಿದ ಲಕೋಟೆಯನ್ನು ಲಗತ್ತಿಸಿ ಕಳಿಸಬೇಕು. ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು ರೂ.13,310 ಗೌರವಧನ ನೀಡಲಾಗುವುದು. ಅಭ್ಯರ್ಥಿಗಳು ಸ್ವವಿವರದ ಭಾವಚಿತ್ರವುಳ್ಳ ಅರ್ಜಿಯನ್ನು ಭರ್ತಿ ಮಾಡಿ ಆಗಸ್ಟ್ 21ರ ಒಳಗೆ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕೊಡಿ ಸಂ. 42, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿಗೆ ಸಲ್ಲಿಸಬೇಕು.


By Priya

Leave a Reply

Your email address will not be published. Required fields are marked *