ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಎಂ.ಫಿಲ್, ಪಿಹೆಚ್‌ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Join Our WhatsApp Group

ಹೈಲೈಟ್ಸ್‌:

  • ಕೆಎಸ್‌ಡಬ್ಲ್ಯೂಯು ಎಂಫಿಲ್, ಪಿಹೆಚ್‌ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ.
  • ಕೋರ್ಸ್‌ಗಳ ವಿವರ, ಅರ್ಹತೆ ಇಲ್ಲಿ ನೀಡಲಾಗಿದೆ.
  • ವೆಬ್‌ಸೈಟ್‌ www.kswu.ac.in ನಲ್ಲಿ ಹೆಚ್ಚಿನ ಮಾಹಿತಿ ಲಭ್ಯ.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ 2020-21ನೇ ಶೈಕ್ಷಣಿಕ ಸಾಲಿಗೆ ವಿವಿಧ ಕೋರ್ಸ್‌ಗಳಲ್ಲಿ ಎಂ.ಫಿಲ್ ಮತ್ತು ಪಿಹೆಚ್‌.ಡಿ ಅಧ್ಯಯನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೋರ್ಸ್‌ಗಳ ವಿವರ, ಇತರೆ ಮಾಹಿತಿ ಈ ಕೆಳಗಿನಂತಿದೆ.

 

ಎಂ.ಫಿಲ್ / ಪಿಹೆಚ್‌.ಡಿ ಅಧ್ಯಯನ ಕೋರ್ಸ್‌ಗಳು

ಕನ್ನಡ, ಹಿಂದಿ, ಇಂಗ್ಲಿಷ್, ಅರ್ಥಶಾಸ್ತ್ರ, ಸಮಾಜ ಕಾರ್ಯ, ಮಹಿಳಾ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಕಂಪ್ಯೂಟರ್ ಸೈನ್ಸ್‌, ವಿದ್ಯುನ್ಮಾನ ಭೌತಶಾಸ್ತ್ರ, ಆಹಾರ ಸಂಸ್ಕರಣೆ ಮತ್ತು ಪೋಷಣೆ, ಔ‍ಷಧೀಯ ರಸಾಯನಶಾಸ್ತ್ರ, ಜೈವಿಕ ಮಾಹಿತಿ ವಿಜ್ಞಾನ ವ್ಯವಹಾರ (ಎಂ.ಬಿ.ಎ) ಶಿಕ್ಷಣ ಮತ್ತು ದೈಹಿಕ ಶಿಕ್ಷಣ.

 

ಎಂ.ಪಿಲ್, ಪಿಹೆಚ್‌.ಡಿ ಅಧ್ಯಯನಕ್ಕೆ ಅರ್ಹತೆಗಳು

– ಮೇಲೆ ತಿಳಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಾಸ್‌ ಮಾಡಿರಬೇಕು.

– ಎನ್‌ಇಟಿ / ಕೆಎಸ್‌ಇಟಿ / ಪಿಹೆಚ್‌.ಡಿ ಪ್ರವೇಶ ಪರೀಕ್ಷೆ ಯಾವುದಾದರೂ ಒಂದರಲ್ಲಿ ಅರ್ಹತೆ ಪಡೆದಿರಬೇಕು.

ಇತರೆ ಹೆಚ್ಚಿನ ವಿವರಗಳನ್ನು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವೆಬ್‌ಸೈಟ್‌ www.kswu.ac.in ನಲ್ಲಿ ಪಡೆಯಬಹುದಾಗಿದೆ.


By Priya

Leave a Reply

Your email address will not be published. Required fields are marked *