ಎಲ್ಲಕ್ಕಿಂತ ಅಗ್ಗದ 84 ದಿನಗಳ ರಿಚಾರ್ಜ್ ಪ್ಲಾನ್, ರೂ.329 ರಲ್ಲಿ ಉಚಿತ ಕಾಲಿಂಗ್ ಹಾಗೂ ಡೇಟಾ

Join Our WhatsApp Group

 

ದೇಶದ ಟೆಲಿಕಾಂ ಕಂಪನಿಗಳು ವಿವಿಧ ವ್ಯಾಲಿಡಿಟಿ ಹಾಗೂ ಡೇಟಾ ಸೌಲಭ್ಯಗಳಿರುವ ಹಲವಾರು ಪ್ಲಾನ್ ಗಳನ್ನು ಜಾರಿಗೊಳಿಸುತ್ತಿವೆ. ಕೆಲ ಗ್ರಾಹಕರು 28 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಂಡರೆ ಇನ್ನುಳಿದ ಗ್ರಾಹಕರು 365 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಗಳನ್ನು ಆಯ್ಕೆ ಮಾಡುತ್ತಾರೆ. ಇಂದು ನಾವು ನಿಮಗೆ ರಿಲಯನ್ಸ್ ಜಿಯೋ (Jio), ಏರ್ಟೆಲ್ (Airtel) ಹಾಗೂ ವೊಡಾಫೋನ್-ಐಡಿಯಾ (Vi) ಕಂಪನಿಗಳ ಅತ್ಯಂತ ಅಗ್ಗದ 84 ದಿನಗಳ ವ್ಯಾಲಿಡಿಟಿ (cheapest prepaid plans 84 days) ಹೊಂದಿರುವ ಪ್ರಿಪೇಯ್ಡ್ ಪ್ಲಾನ್ ಗಳ ಕುರಿತು ಮಾಹಿತಿ ನೀಡಲಿದ್ದೇವೆ. ಈ ಪ್ಲಾನ್ ಗಳಲ್ಲಿ ಡೇಟಾ ಹಾಗೂ smsಗಳ ಜೊತೆಗೆ ಅನಿಯಮಿತ ಕಾಲಿಂಗ್ ಸೌಕರ್ಯ ಕೂಡ ಸಿಗುತ್ತದೆ

Jio Rs.329 ರಿಚಾರ್ಜ್ ಪ್ಲಾನ್ 
ಇದು ರಿಲಯನ್ಸ್ ಜಿಯೋ ಪ್ರಸ್ತುತಪಡಿಸಿರುವ ಅತ್ಯಂತ ಅಗ್ಗದ ಬೆಲೆಯ 84 ದಿನಗಳ ಸಿಂಧುತ್ವ ಹೊಂದಿರುವ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಆಗಿದೆ. ಇದರಲ್ಲಿ ಗ್ರಾಹಕರಿಗೆ ಒಟ್ಟು 6ಜಿಬಿ ಡೇಟಾ ನೀಡಲಾಗುತ್ತದೆ. ಡೇಟಾ ಖರ್ಚು ಮಾಡುವ ಯಾವುದೇ ಡೆಲಿ ಲಿಮಿಟ್ ಇಲ್ಲ. ಈ ಪ್ಲಾನ್ ಅಡಿ ಎಲ್ಲಾ ನೆಟ್ವರ್ಕ್ ಗಳಿಗೆ ಉಚಿತ ಅನಿಯಮಿತ ಕರೆಗಳನ್ನು ಮಾಡಬಹುದು ಹಾಗೂ ಒಟ್ಟು 1000 sms ಉಚಿತವಾಗಿ ಕಳುಹಿಸಬಹುದು. ಇದಲ್ಲದೆ Jio TV, JioCinema ಹಾಗೂ Jio News ಆಪ್ ಗಳ ಉಚಿತ ಚಂದಾದಾರಿಕೆ ಕೂಡ ಸಿಗುತ್ತದೆ.

 

Vi Rs.379 ರಿಚಾರ್ಜ್ ಪ್ಲಾನ್ 
ರಿಲಯನ್ಸ್ ಜಿಯೋ ಮಾದರಿಯಲ್ಲಿಯೇ ವೊಡಾಫೋನ್-ಐಡಿಯಾ ಕಂಪನಿಯ 84 ದಿನಗಳ ಸಿಂಧುತ್ವ ಹೊಂದಿರುವ ಪ್ಲಾನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಪ್ಲಾನ್ ಅಡಿ ಯಾವುದೇ ಡೆಲಿ ಲಿಮಿಟ್ ಇಲ್ಲದೆ 6 ಜಿಬಿ ಡೇಟಾ ಸಿಗುತ್ತದೆ. ಇದರಲ್ಲಿಯೂ ಕೂಡ ಎಲ್ಲ ನೆಟ್ವರ್ಕ್ ಗಳಿಗೆ ಉಚಿತ ಕರೆ, ಉಚಿತ 1000 sms ಸಿಗುತ್ತವೆ. ಇದಲ್ಲದೆ ಗ್ರಾಹಕರಿಗೆ Vi Movies & TV Basic ಆಪ್ ಗಳಿಗೆ ಉಚಿತ ಆಕ್ಸಸ್ ನೀಡಲಾಗುತ್ತದೆ.

 

Airtel Rs.379 ರಿಚಾರ್ಜ್ ಪ್ಲಾನ್
ಏರ್ಟೆಲ್ ನ ಈ ಪ್ಲಾನ್ ನ ಬೆಲೆ ಹಾಗೂ ಸೌಲಭ್ಯಗಳು ವೊಡಾಫೋನ್-ಐಡಿಯಾ ಪ್ಲಾನ್ ಹೋಲುತ್ತದೆ . ಈ ಪ್ಲಾನ್ ಅಡಿಯಲ್ಲಿಯೂ ಕೂಡ 84 ದಿನಗಳ ವ್ಯಾಲಿಡಿಟಿ ಯೊಂದಿಗೆ 6 ಜಿಬಿ ಡೇಟಾ, ಎಲ್ಲ ನೆಟ್ವರ್ಕ್ ಗಳಿಗೆ ಉಚಿತ ಕರೆ ಸೌಕರ್ಯ, 1000 sms ಉಚಿತ ನೀಡಲಾಗುತ್ತದೆ. ಈ ಪ್ಲಾನ್ ವಿಶೇಷತೆ ಎಂದರೆ, ಈ ಪ್ಲಾನ್ ಅಡಿ ಗ್ರಾಹಕರಿಗೆ ಒಂದು ತಿಂಗಳ Prime Video ಮೊಬೈಲ್ ಎಡಿಶನ್ ಉಚಿತ ಚಂದಾದಾರಿಕೆ ನೀಡಲಾಗುತ್ತಿದೆ. ಇದಲ್ಲದೆ Airtel Xstream Premium, Free Hellotunes ಹಾಗೂ  Wynk Music ಆಪ್ ಗಳ ಉಚಿತ ಚಂದಾದಾರಿಕೆ ಕೂಡ ಇದರಲ್ಲಿ ನೀಡಲಾಗುತ್ತಿದೆ.

 

 

 

 

 

 

Join Our WhatsApp Group


One thought on “Cheapest Prepaid Plans With 84 Days Validity:”

Leave a Reply

Your email address will not be published. Required fields are marked *