ಕೊಡಗು; ಕೊಡಗು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಖಾಲಿ ಇರುವ ಅಕೌಂಟೆಂಟ್ ಕಂ ಕಚೇರಿ ಸಹಾಯಕ ಮತ್ತು ಕಚೇರಿ ಜವಾನ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳನ್ನು ಮಾಸಿಕ ಗೌರವಧನದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅಕೌಂಟೆಂಟ್ ಕಂ ಕಚೇರಿ ಸಹಾಯಕ ಹುದ್ದೆ (1) ಖಾಲಿ ಇದ್ದು ಅಭ್ಯರ್ಥಿಗಳು ಬಿ.ಕಾಂ ಪದವಿ ಹೊಂದಿರಬೇಕು, ಲೆಕ್ಕ ಪತ್ರಗಳನ್ನು ನಿರ್ವಹಿಸುವಲ್ಲಿ/ ಅಕೌಂಟೆಂಟ್ ಹುದ್ದೆಯಲ್ಲಿ ಕನಿಷ್ಠ 5 ವರ್ಷಗಳ ಅನುಭವ ಇರಬೇಕು, ಲೆಕ್ಕ ಪತ್ರದಲ್ಲಿ ಬ್ಯಾಂಕ್ ವ್ಯವಹಾರಗಳನ್ನು, ಸರ್ಕಾರದ ಲೆಕ್ಕ ಪತ್ರಗಳನ್ನು ತಯಾರಿಸುವ ಲೆಕ್ಕ ಪತ್ರಗಳಿಗೆ ಸಂಬಂಧಿಸಿದ ದಾಖಲೆ, ರಿಜಿಸ್ಟರ್‌ಗಳ ಕುರಿತು ಮಾಹಿತಿಯನ್ನು ಹೊಂದಿರಬೇಕು. ಅಭ್ಯರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಮಾತನಾಡುವ ಹಾಗೂ ಬರೆಯುವ ಉತ್ತಮ ಶೈಲಿ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು, ಟ್ಯಾಲಿ ತಂತ್ರಾಂಶ ಉಪಯೋಗಿಸುವ ಕೌಶಲ್ಯ ಇರಬೇಕು. ಕಚೇರಿ ಪತ್ರ ವ್ಯವಹಾರಗಳ, ಲೆಕ್ಕ ಪತ್ರಗಳ ವ್ಯವಹಾರಗಳನ್ನು ಗಣಕೀಕೃತದಲ್ಲಿ ನಮೂದಿಸಿ ಕೇಂದ್ರ ಕಚೇರಿಗಳಿಗೆ ಗಣಕ ಯಂತ್ರದ ಮೂಲಕ ಕಳುಹಿಸುವ ಪರಿಣತಿ ಹೊಂದಿರಬೇಕು. ಮಾಸಿಕ ಗೌರವಧನ 13,310. ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಗರಿಷ್ಠ ವಯೋಮಿತಿ 40 ವರ್ಷ.

 

ಕಚೇರಿ ಜವಾನ ಹುದ್ದೆ; 1 ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣಗೊಂಡ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಕಚೇರಿಯಲ್ಲಿ ಹಾಗೂ ಇತರೆ ಶುಚಿತ್ವ ಕಾಪಾಡುವ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು, ಓದಲು, ಬರೆಯಲು ಬರಬೇಕು. ಮಾಸಿಕ ಗೌರವ ಧನ 10,648 ರೂ.ಗಳು. ಗರಿಷ್ಠ ವಯೋಮಿತಿ 40 ವರ್ಷ ಮೀರಿರಬಾರದು. ಅಭ್ಯರ್ಥಿಗಳು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ವಿವರಗಳನ್ನು ನಮೂದಿಸಿ ಎಲ್ಲಾ ದಾಖಲೆಗಳ ನಕಲು ಪ್ರತಿಗಳನ್ನು ಲಗತ್ತಿಸಿ, ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಕೊಡಗು ಜಿಲ್ಲೆ ಮಡಿಕೇರಿ ಇವರ ಹೆಸರಿಗೆ ಅರ್ಜಿ ಬರೆದು, ಈ ಅರ್ಜಿಯನ್ನು ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ಇಲಾಖೆ, ಮೊದಲನೆ ಮಹಡಿ, ಕೊಠಡಿ ಸಂಖ್ಯೆ 11, ಜಿಲ್ಲಾಡಳಿತ ಭವನ, ಕೊಡಗು ಜಿಲ್ಲೆ ಮಡಿಕೇರಿ ಇವರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಆಗಸ್ಟ್, 21 ಕೊನೆಯ ದಿನ.


By Priya

Leave a Reply

Your email address will not be published. Required fields are marked *