ಪದವೀಧರರಾ? ರಾಜ್ಯ ನೌಕರರ ವಿಮಾ ನಿಗಮದಲ್ಲಿವೆ 3,865 ಹುದ್ದೆಗಳು- ಕರ್ನಾಟಕದಲ್ಲಿಯೂ ಭರಪೂರ ಅವಕಾಶ

ರಾಜ್ಯ ನೌಕರರ ವಿಮಾ ನಿಗಮದ (Employees State Insurance Corporation – ESIC) ವತಿಯಿಂದ 3865 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

 

ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಅಪ್ಪರ್ ಡಿವಿಷನ್ ಕ್ಲರ್ಕ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಶೀಘ್ರಲಿಪಿಗಾರ ಹೀಗೆ ಒಟ್ಟು 3865 ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ ಅಪ್ಪರ್ ಡಿವಿಷನ್‌ ಕ್ಲರ್ಕ್ 199 ಹುದ್ದೆ, ಸ್ಟೆನೋಗ್ರಾಫರ್ 18 ಹುದ್ದೆ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್‌ 65 ಹುದ್ದೆ ಖಾಲಿ ಇವೆ.

 

ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಜನವರಿ 15, 2022 ರಿಂದ ಪ್ರಾರಂಭವಾಗಿ ಫೆಬ್ರವರಿ 15, 2022 ರಂದು ಕೊನೆಗೊಳ್ಳಲಿದೆ.

 

ಹುದ್ದೆಗಳ ವಿವರ:
ಅಪ್ಪರ್ ಡಿವಿಷನ್ ಕ್ಲರ್ಕ್ – 1736
ಮಲ್ಟಿ ಟಾಸ್ಕಿಂಗ್ ಸ್ಟಾಫ್ – 1964
ಶೀಘ್ರಲಿಪಿಗಾರ – 165

 

ವಯೋಮಿತಿ:  27 ವರ್ಷದ ಒಳಗಿರಬೇಕು. ಆದರೆ ಮಲ್ಟಿ ಟಾಸ್ಕಿಂಗ್ ಸ್ಟಾಫ್​ಗೆ ಗರಿಷ್ಠ 25 ವರ್ಷ.

 

ಆಯ್ಕೆ ಪ್ರಕ್ರಿಯೆ: ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಗಳಿವೆ.

 

ವಿದ್ಯಾರ್ಹತೆ: SSLC/ PUC/ Any Degree

 

ವೇತನ:18,000/- ರಿಂದ 56,900/-ರೂ.

 

ಅರ್ಜಿ ಶುಲ್ಕ: 250/-ರೂ ರಿಂದ500/-ರೂ.

 

-:ಹೆಚ್ಚಿನ ಮಾಹಿತಿಗಾಗಿ :-

 

Notification


By Priya

Leave a Reply

Your email address will not be published. Required fields are marked *