ತಪ್ಪಿ ಬೇರೆಯವರ ಖಾತೆಗೆ ದುಡ್ಡು ಟ್ರಾನ್ಸ್ಫರ್ ಆದರೆ ಹೀಗೆ ಮಾಡಿ ..

ತಪ್ಪಿ ಬೇರೆಯವರ ಖಾತೆಗೆ ದುಡ್ಡು ಟ್ರಾನ್ಸ್ಫರ್ ಆದರೆ ಹೀಗೆ ಮಾಡಿ ..


ತಪ್ಪು ಖಾತೆಗೆ ದುಡ್ಡು ಹೋದರೆ, ಟ್ರಾನ್ಸ್ ಫರ್ ಆದ ದುಡ್ಡು ಮರಳಿ ಬರುವುದಿಲ್ಲ ಎಂದೇ ಸಾಕಷ್ಟು ಜನ ಭಾವಿಸಿದ್ದಾರೆ. ಆದರೆ ವಾಸ್ತವ ಹಾಗಿಲ್ಲ. ತಪ್ಪು ಖಾತೆಗೆ ನಿಮ್ಮ ಹಣ ಸಂದಾಯವಾದರೆ, ಸಂದಾಯವಾದ ಹಣವನ್ನು ಹಿಂತಿರುಗಿ ಪಡೆಯಬಹುದು.


Join Our WhatsApp Group


ಇದು ಅವಸರದ ಯುಗ.  ಜೊತೆಗೆ ಎಲ್ಲವೂ ಡಿಜಿಟಲ್ (Digital). ಸ್ಮಾರ್ಟ್ ಫೋನಿನಲ್ಲೇ (Smartphone) ಎಲ್ಲಾ ಕೆಲಸವೂ ಆಗಿ ಬಿಡುತ್ತದೆ. ಜೊತೆಗೆ ಯಾರ ಬಳಿಯೂ ಸಮಯ  ಇಲ್ಲ. ಎಲ್ಲರೂ ಬ್ಯೂಸಿ. ಹೀಗಿರುವಾಗ ಕೆಲವೊಮ್ಮೆ ಅವಾಂತರಗಳು ಘಟಿಸುವುದು ಸರ್ವೇ ಸಾಮಾನ್ಯ. ಈ ಅವಸರದ ಕಾರಣದಿಂದಲೇ ಕೆಲವೊಮ್ಮೆ ಯಾರಿಗೋ ಟ್ರಾನ್ಸ್ ಫರ್ (Transfer) ಮಾಡಬೇಕಾಗಿದ್ದ ದುಡ್ಡು ಇನ್ಯಾರಿಗೋ ಟ್ರಾನ್ಸ್ ಫರ್ ಆಗಿರುತ್ತದೆ. ಆನ್ ಲೈನ್ (Online) ವ್ಯವಹಾರದಲ್ಲಿ ಇದು ಸಹಜ. ಒಂದೇ ಒಂದು ಡಿಜಿಟ್ ಹೆಚ್ಚು ಕಡಿಮೆ ಆದರೂ, ನಿಮ್ಮ ದುಡ್ಡು ಕಟ್ ಆಗಿರುತ್ತದೆ. ಇಂಥ ಸನ್ನಿವೇಶವನ್ನು ನೀವು ಎದುರಿಸಿರಲೂ ಬಹುದು.

BharatPe Referral Code | All in One Upi Payment App Refer & Get 100Rs


ಈ ರೀತಿ ತಪ್ಪು ಖಾತೆಗೆ ದುಡ್ಡು ಹೋದರೆ, ಟ್ರಾನ್ಸ್ ಫರ್ ಆದ ದುಡ್ಡು ಮರಳಿ ಬರುವುದಿಲ್ಲ ಎಂದೇ ಸಾಕಷ್ಟು ಜನ ಭಾವಿಸಿದ್ದಾರೆ.  ಆದರೆ ವಾಸ್ತವ ಹಾಗಿಲ್ಲ.  ತಪ್ಪು ಖಾತೆಗೆ ನಿಮ್ಮ ಹಣ ಸಂದಾಯವಾದರೆ, ಸಂದಾಯವಾದ ಹಣವನ್ನು ಹಿಂತಿರುಗಿ ಪಡೆಯಬಹುದು. ಅದಕ್ಕೊಂದು ಪ್ರಕ್ರಿಯೆ ಇದೆ. ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ನಿಮ್ಮ ದುಡ್ಡು ನಿಮಗೆ ಸಿಗುತ್ತದೆ.

 

Using UPI app? What to do if lose your mobile phone

ನೀವು ಏನು ಮಾಡಬೇಕು..?
1.ಏನೋ ಎಡವಟ್ಟಾಗಿ ಬೇರೆ ಖಾತೆಗೆ ದುಡ್ಡು ಟ್ರಾನ್ಸ್ ಫರ್ ಆದಾಗ ಗಾಬರಿಯಾಗಬೇಡಿ. ಮೊದಲು ನಿಮ್ಮ ಬ್ಯಾಂಕ್ (bank) ಶಾಖೆಗೆ ಆದಷ್ಟು ಬೇಗ ಭೇಟಿ ಕೊಡಿ. ಯಾರ ಖಾತೆಗೆ ದುಡ್ಡು ವರ್ಗಾವಣೆಯಾಗಿದೆ ಎಂಬುದು ತಿಳಿದುಕೊಳ್ಳಿ.
2.ಇದಾದ ಮೇಲೆ ಯಾವ ವ್ಯಕ್ತಿಯ ಖಾತೆಗೆ ದುಡ್ಡು ವರ್ಗಾವಣೆಯಾಗಿದೆಯೋ ಆ ಬ್ಯಾಂಕಿಗೆ ತೆರಳಿ.
3.ನೀವು ತಪ್ಪಾಗಿ ಮಾಡಿದ ಟ್ರಾನ್ಸಾಕ್ಷನ್ (Wrong transaction)  ಎಂಬುದಕ್ಕೆ ನೀವು ದಾಖಲೆ, ಪ್ರಮಾಣ ತೋರಿಸಿದರೆ ಬ್ಯಾಂಕ್ ನಿಮ್ಮ ದುಡ್ಡನ್ನು ನಿಮಗೆ ಮರಳಿಸುತ್ತದೆ.
4.ನಿಮ್ಮ  ಅನುಮತಿ ಇಲ್ಲದೆ ನಿಮ್ಮ ಖಾತೆಯಿಂದ ದುಡ್ಡು ಡ್ರಾ ಆದರೆ,  ಆ ಟ್ರಾನ್ಸಾಕ್ಷನ್ ಮಾಹಿತಿಯನ್ನು ನೀವು ಮೂರು ದಿನಗಳ ಒಳಗೆ ಬ್ಯಾಂಕಿಗೆ ತಿಳಿಸಬೇಕು. ಇದು ಆರ್ ಬಿಐ ನಿಯಮ
5.ಹೀಗೆ ಮಾಡಿದರೆ, ನಿಮ್ಮ ದುಡ್ಡು ಉಳಿಯುತ್ತದೆ. ನಿಮ್ಮ ಖಾತೆಗೆ (Account) ದುಡ್ಡು ಮರಳಿ ಬರುತ್ತದೆ.

Paytm all-in-one Android POS device for merchant partners launched | 91mobiles.com


ತಪ್ಪು ಖಾತೆಗೆ ದುಡ್ಡು ವರ್ಗಾಯಿಸಿರುವ  ಅನೇಕ ಪ್ರಕರಣಗಳು ಇತ್ತೀಚೆಗೆ ದಾಖಲಾಗುತ್ತಿದೆ. ಆನ್ ಲೈನ್ ವಂಚಕರೂ (Online  fraud) ಬೇರೆ ಬೇರೆ ವಿಧಾನಗಳ ಮೂಲಕ ನಿಮ್ಮ ಖಾತೆಯಿಂದ ದುಡ್ಡು ಪೀಕುತ್ತಾರೆ.  ಡಿಜಿಟಲ್ (Digital) ಜಮಾನದಲ್ಲಿ ಡಿಜಿಟಲ್ ವಂಚನೆ ಕೂಡಾ ದೊಡ್ಡ ಪ್ರಮಾಣದಲ್ಲಿ ಏರುತ್ತಿದೆ.  ಹಾಗಾಗಿ, ಆಕಸ್ಮತ್ತಾಗಿ ದುಡ್ಡು ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿರುತ್ತದೆ. ಆ ಸನ್ನಿವೇಶದಲ್ಲಿ ಗಾಬರಿಯಾಗದೇ, ಆರ್ ಬಿಐ (RBI) ನಿಯಮದಂತೆ ಮಾಡಿ


Join Our WhatsApp Group


Leave a Reply

Your email address will not be published. Required fields are marked *