IIPM Bangalore Recruitment 2020

IIPM Bangalore Recruitment 2020: ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟೇಶನ್ ಮ್ಯಾನೇಜ್ಮೆಂಟ್ ಬೆಂಗಳೂರು ಇಲ್ಲಿ ಆಡಳಿತಾಧಿಕಾರಿ/ಡೆಪ್ಯುಟಿ ರಿಜಿಸ್ಟ್ರಾರ್, ಕಾರ್ಪೋರೇಟ್ ರಿಲೇಷನ್ಸ್ ಮತ್ತು ಪ್ಲೇಸ್ ಮೆಂಟ್ ಎಕ್ಸಿಕ್ಯುಟಿವ್/ಮ್ಯಾನೇಜರ್ ಮತ್ತು ಆಫೀಸ್ ಅಸೋಸಿಯೇಟ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಹತೆ: ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಡಿಪ್ಲೋಮಾ ಮತ್ತು ಪೋಸ್ಟ್ ಗ್ರಾಜುಯೇಟ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಯೋಮಿತಿ: ಹುದ್ದೆಗಳಿಗನುಸಾರ ಗರಿಷ್ಟ 45 ಮತ್ತು 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ವೇತನ: ಈ ಹುದ್ದೆಗಳಿಗೆ ಅಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು. ಅರ್ಜಿ ಶುಲ್ಕ: ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ. ಅರ್ಜಿ ಸಲ್ಲಿಕೆ: ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ director@iipmb.edu.in/directoriipm@gamil.com ವಿಳಾಸಕ್ಕೆ ನವೆಂಬರ್ 16,2020ರೊಳಗೆ ಮೇಲ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ನಂತರ ಅರ್ಜಿಯ ಪ್ರತಿಯನ್ನು ಕಚೇರಿಗೆ ಕಳುಹಿಸಬೇಕಿರುತ್ತದೆ. ಕಚೇರಿ ವಿಳಾಸ: ದಿ ಡೈರೆಕ್ಟರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟೇಶನ್ ಮ್ಯಾನೇಜ್ಮೆಂಟ್ ಬೆಂಗಳೂರು, ಜ್ಞಾನಭಾರತಿ ಕ್ಯಾಂಪಸ್, ಮಾಲತಳ್ಳಿ ಪೋಸ್ಟ್, ಬೆಂಗಳೂರು-560056

ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ

ಕ್ಲಿಕ್ ಮಾಡಿ

 

ನೇಮಕಾತಿ ಬಗ್ಗೆ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಲಿಕ್ ಮಾಡಿ

 


Leave a Reply

Your email address will not be published. Required fields are marked *