ಇಂಡಿಯನ್ ಆಯಿಲ್ ಸಂಸ್ಥೆಯಲ್ಲಿ 300 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿವೆ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ 2021ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಅಧಿಸೂಚನೆ ಪ್ರಕಟಣೆ ಹೊರಡಿಸಿದೆ. 300 ಟ್ರೇಡ್ ಅಪ್ರೆಂಟಿಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 27, 2021ರೊಳಗೆ ಸೂಕ್ತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬಹುದು.

ಸಂಸ್ಥೆ ಹೆಸರು: ಇಂಡಿಯನ್ ಆಯಿಲ್ ಕಾರ್ಪೊರೇಷನ್

ಒಟ್ಟು ಹುದ್ದೆ: 300

ಹುದ್ದೆ ಹೆಸರು: Trade Apprentice

ಉದ್ಯೋಗ ಸ್ಥಳ: ಭಾರತದೆಲ್ಲೆಡೆ

 

ಹುದ್ದೆ ಹೆಸರು: ಟ್ರೇಡ್ ಅಪ್ರೆಂಟಿಸ್ ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಇನ್ಸ್ಟ್ರೂಮೆಂಟ್ ಮೆಕ್ಯಾನಿಕ್, ಮಷಿನಿಸ್ಟ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿವಿಲ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಮುಂತಾದ ತಾಂತ್ರಿಕ ಹುದ್ದೆಗಳಿವೆ.

 

ವಿದ್ಯಾರ್ಹತೆ:10 ಹಾಗೂ 12ನೇ ತರಗತಿ ಪಾಸ್. ಐಟಿಐ ಹಾಗೂ ಸಂಬಂಧಪಟ್ಟ ಟ್ರೇಡ್ ಅನುಭವ

 

ರಾಜ್ಯವಾರು ಹುದ್ದೆಗಳ ಸಂಖ್ಯೆ ವಿವರ

ತಮಿಳುನಾಡು ಹಾಗೂ ಪುದುಚೇರಿ: 84 ಹುದ್ದೆಗಳು

ಕರ್ನಾಟಕ: 52

ಕೇರಳ: 49

ಆಂಧ್ರಪ್ರದೇಶ: 55

ತೆಲಂಗಾಣ: 60

 

ವಯೋಮಿತಿ: 18 ರಿಂದ 24 ವರ್ಷ.
 
ಪ್ರಮುಖ ದಿನಾಂಕ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 27/12/2021
 
Notification

By Priya

Leave a Reply

Your email address will not be published. Required fields are marked *