ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಉತ್ತೀರ್ಣರಿಗೆ ಆದಾಯ ತೆರಿಗೆ ಕಚೇರಿಯಲ್ಲಿದೆ ಉದ್ಯೋಗಾವಕಾಶ

ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತರ ಕಚೇರಿಯಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ 2 ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ಶಾಶ್ವತವಾಗುವ ಸಾಧ್ಯತೆಯೂ ಇರುತ್ತದೆ. ಕ್ರೀಡಾಪಟುಗಳಿಗೆ ವಿಶೇಷ ಆದ್ಯತೆ ಇದೆ. ಒಟ್ಟು 22 ಕ್ರೀಡೆಗಳನ್ನು ಪರಿಗಣಿಸಲಾಗುತ್ತಿದ್ದು, ಯಾವ ಕ್ರೀಡೆಗಳಿಗೆ ಮಾನ್ಯತೆ ಇದೆ ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

ಹುದ್ದೆ ವಿವರ
ಇನ್​ಕಮ್ ಟ್ಯಾಕ್ಸ್ ಇನ್​ಸ್ಪೆಕ್ಟರ್ – 3
ಟ್ಯಾಕ್ಸ್ ಅಸಿಸ್ಟೆಂಟ್ – 7
ಸ್ಟೆನೋಗ್ರ್ರಾಫರ್ ಗ್ರೇಡ್2 – 1
ಮಲ್ಟಿ ಟಾಸ್ಕಿಂಗ್ ಸ್ಟಾಫ್ – 4

ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ಪಡೆದಿರಬೇಕು.

ವೇತನ: ಇನ್​ಕಮ್ ಟ್ಯಾಕ್ಸ್ ಆಫೀಸರ್​ಗೆ ಮಾಸಿಕ 34,800 ರೂ. ವೇತನ ಇದೆ. ಉಳಿದ ಹುದ್ದೆಗಳಿಗೆ ಮಾಸಿಕ 20,200 ರೂ. ವೇತನ ನೀಡಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ: ಅಭ್ಯರ್ಥಿಗಳು ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಹಾಗೂ ಕ್ರೀಡಾ ವಿಭಾಗದಲ್ಲಿ ಯಾವ ಕ್ರೀಡೆ ಎಂಬುದನ್ನು ಅರ್ಜಿಯಲ್ಲಿ ತಿಳಿಸಬೇಕು. ಅಗತ್ಯ ದಾಖಲೆಗಳ ಸಹಿತ ಅರ್ಜಿಯನ್ನು Deputy Commissioner of Income Tax (Hqrs.)(Admn. & Vig.), O/o the Pr. Chief Commissioner of Income Tax, 1st Floor, Aayakar Bhawan, Rajaswa Vihar, Bhubaneswar-751007 ವಿಳಾಸಕ್ಕೆ ಕಳುಹಿಸಬೇಕು.

 

 

 

ಅರ್ಜಿ ಸಲ್ಲಿಕೆಗೆ ಕೊನೇ ದಿನ: 30.9.2021
ಅಧಿಸೂಚನೆಗೆ: https://bit.ly/3zOe1q7
ಮಾಹಿತಿಗೆ: www.incometaxdelhi.org


By Priya

Leave a Reply

Your email address will not be published. Required fields are marked *