Join Our WhatsApp Group

ಕೊಪ್ಪಳ ಉದ್ಯೋಗ ವಿನಿಮಯ ಕೇಂದ್ರದಲ್ಲಿ ವಾಕ್ ಇನ್ ಸಂದರ್ಶನ

ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ವಾಕ್ ಇನ್ ಸಂದರ್ಶನವನ್ನು ಆಯೋಜಿಸಿದೆ.

ಸಂದರ್ಶನ ಮಾರ್ಚ್ 2 ಹಾಗೂ 3 ರಂದು ಬೆಳಗ್ಗೆ 10.30 ರಿಂದ 4 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕೊಪ್ಪಳದಲ್ಲಿ ನಡೆಯಲಿದೆ. ವಾಕ್-ಇನ್-ಇಂಟರ್‌ವ್ಯೂನಲ್ಲಿ ಕ್ಯಾಪ್ಷನ್ ಫೆಸಿಲಿಟೀಸ್ ಮ್ಯಾನೇಜ್‌ಮೆಂಟ್ ಲಿ. ಇವರು ತಮ್ಮಲ್ಲಿನ ಖಾಲಿ ಇರುವ ಹುದ್ದೆಗಳನ್ನು ಸೆಕ್ಯೂರಿಟಿ ಗಾರ್ಡ್ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದು, ಯಾವುದೇ ಶುಲ್ಕವಿಲ್ಲದೇ ಉಚಿತ ಪ್ರವೇಶವಿರುತ್ತದೆ.

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಯಾವುದೇ ಪದವೀಧರ ಅಭ್ಯರ್ಥಿಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ವಾಕ್-ಇನ್-ಇಂಟರ್‌ವ್ಯೂನಲ್ಲಿ ಭಾಗವಹಿಸುವ ಯುವಕ-ಯುವತಿಯರ ವಯೋಮಿತಿಯು 18 ರಿಂದ 35 ವಯಸ್ಸಿರಬೇಕು. 166 ಸೆಂ.ಮೀ ಎತ್ತರ, ಅರ್ಹ ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲಾ ಪ್ರಮಾಣ ಪತ್ರಗಳು ಮತ್ತು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿ, 1 ರಿಂದ 3 ಬಯೋಡಾಟಾ(ರಿಸ್ಯೂಮ್) ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ವಾಕ್-ಇನ್-ಇಂಟರ್‌ವ್ಯೂನಲ್ಲಿ ಭಾಗವಹಿಸಿ ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕೊಪ್ಪಳ ದೂ. ಸಂ: 08539-220859, 9353515518 ಗೆ ಸಂಪರ್ಕಿಸಿ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Join Our WhatsApp Group


By Priya

Leave a Reply

Your email address will not be published. Required fields are marked *