Join Our WhatsApp Group

ಹುಬ್ಬಳ್ಳಿಯ ಪ್ರಾದೇಶಿಕ ಎಣ್ಣೇಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿಯಮಿತದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಸೂಚನೆ ಹೊರಡಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು: 15

ಒಕ್ಕೂಟದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ನಮೂನೆಯನ್ನು ಗಣಕಯಂತ್ರದಿಂದ ಬೆರಳಚ್ಚು ಮಾಡಿದ ಅರ್ಜಿಯನ್ನು ಪೂರ್ಣ ಭರ್ತಿಮಾಡಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿ ಹಾಗೂ ಶುಲ್ಕ ಪಾವತಿಸಬೇಕು.

 

ಹುದ್ದೆ ವಿವರ
* ಸಾಮಾನ್ಯ ಕೆಲಸಗಾರ – 4
* ಚಾಲಕ – 1
* ಸಹಾಯಕ ಮಾರಾಟಾಧಿಕಾರಿ – 4
* ಸಹಾಯಕ ಲೆಕ್ಕಾಧಿಕಾರಿ – 3
* ಸಹಾಯಕ ಆಡಳಿತಾಧಿಕಾರಿ – 1
* ಕ್ಷೇತ್ರಾಧಿಕಾರಿ – 2

ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ಬಿಕಾಂ, ಕಾನೂನು, ಕೃಷಿ ಜತೆ ಯಾವುದೇ ಪದವಿ, ಎಂಬಿಎ ಪಡೆದಿರಬೇಕು. ಕಂಪ್ಯೂಟರ್​ ಜ್ಞಾನ ಅವಶ್ಯ. ಚಾಲಕ ಹುದ್ದೆಗೆ ಲಘು ಹಾಗೂ ಭಾರಿ ವಾಹನ ಚಾಲನೆ ಪರವಾನಗಿ ಹೊಂದಿರಬೇಕು.ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿಗೆ ಗರಿಷ್ಠ 38 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ: ಸಾಮಾನ್ಯ ಕೆಲಸಗಾರ ಹಾಗೂ ಚಾಲಕ ಹುದ್ದೆಗೆ ಮಾಸಿಕ 17,000& 28,950 ರೂ., ಕ್ಷೇತ್ರಾಧಿಕಾರಿ ಹುದ್ದೆಗೆ ಮಾಸಿಕ 37,900 & 70,850 ರೂ. ವೇತನ ಇದೆ. ಉಳಿದ ಹುದ್ದೆಗಳಿಗೆ ಮಾಸಿಕ 27,650& 52,650 ರೂ. ವೇತನ ಇದೆ.

 

ಆಯ್ಕೆ ವಿಧಾನ: ಅಭ್ಯರ್ಥಿಗಳು ಶೈಕ್ಷಣಿಕ ಅಂಕ, ವಿದ್ಯಾರ್ಹತೆ, ಅಗತ್ಯ ದಾಖಲೆಗಳ ಆಧಾರದ ಮೇಲೆ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀೆಗೆ ಆಹ್ವಾನಿಸಲಾಗುವುದು. ಲಿಖಿತ ಪರೀೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಒಕ್ಕೂಟ ತಿಳಿಸಿದ ಸ್ಥಳದಲ್ಲಿ ಅಭ್ಯರ್ಥಿಗಳು ಲಿಖಿತ ಪರೀೆ ಹಾಗೂ ಸಂದರ್ಶನಕ್ಕೆ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

|| Download ||

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳು 500 ರೂ., ಇತರ ಅಭ್ಯರ್ಥಿಗಳು 1,000 ರೂ. ಅರ್ಜಿ ಶುಲ್ಕ ಪಾವತಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೇ ದಿನ: 8.5.2021
ಅರ್ಜಿ ಸಲ್ಲಿಸುವ ವಿಳಾಸ: ವ್ಯವಸ್ಥಾಪಕ ನಿರ್ದೇಶಕರು, ಪ್ರಾದೇಶಿಕ ಎಣ್ಣೇಬಿಜ ಬೆಳೆಗಾರರ ಸಹಕಾರಿ ಸಂಗಳ ಒಕ್ಕೂಟ ನಿಯಮಿತ, ಹುಬ್ಬಳ್ಳಿ ರಸ್ತೆ, ತಾಜ್​ನಗರ, ಹುಬ್ಬಳ್ಳಿ & 580 031

|| Download ||


By Priya

Leave a Reply

Your email address will not be published. Required fields are marked *