Land Surveyor Recruitment 2022: 3000 ಪರವಾನಗಿ ಭೂಮಾಪಕರ ನೇಮಕಾತಿಗೆ ಮತ್ತೆ ಅಧಿಸೂಚನೆ ಹೊರಡಿಸಿದ ಇಲಾಖೆ

  • ಭೂಮಾಪಕರ  ಹುದ್ದೆಗಳಿಗೆ ಮತ್ತೆ ಅಧಿಸೂಚನೆ ಪ್ರಕಟ
  • 3 ಸಾವಿರ ಭೂಮಾಪಕರ ಹುದ್ದೆಗಳ ಭರ್ತಿಗೆ ನೇಮಕಾತಿ
  • ಜನವರಿ 21ರವರೆಗೆ  ಅರ್ಜಿ ಸಲ್ಲಿಸಲು ಅವಕಾಶ

 

ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದಂತೆ ಒಟ್ಟು 3 ಸಾವಿರ  ಲ್ಯಾಂಡ್‌ ಸರ್ವೇಯರ್‌ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಜನವರಿ 21ರವರೆಗೆ  ಅರ್ಜಿ ಸಲ್ಲಿಸಬಹುದು.

 

ಶೈಕ್ಷಣಿಕ ವಿದ್ಯಾರ್ಹತೆ (Education): ಕನಿಷ್ಠ ಪದವಿಪೂರ್ವ ಶಿಕ್ಷಣ (ಪಿಯುಸಿ) ಅಥವಾ ಕೇಂದ್ರ ಪ್ರೌಢಶಿಕ್ಷಣ ಮಂಡಳಿ ನಡೆಸುವ 12ನೇ ತರಗತಿ ಸಿಬಿಎಸ್‍ಸಿ ಅಥವಾ ಐಸಿಎಸ್‍ಇ ಇವುಗಳಲ್ಲಿ ವಿಜ್ಞಾನ ವಿಷಯ ಪಡೆದು ಗಣಿತ ವಿಷಯದಲ್ಲಿ ಶೇ.60 ಕ್ಕಿಂತ ಕಡಿಮೆ ಇಲ್ಲದೆಂತೆ ಅಂಕ ಪಡೆದು ಉತ್ತೀರ್ಣರಾಗಿರಬೇಕು. ಅಥವಾ ನೋಂದಾಣಿಯಾಗಿರುವ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಇ (ಸಿವಿಲ್)/ಅಥವಾ ಬಿ.ಟೆಕ್ (ಸಿವಿಲ್)/ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರುವವರೂ ಸಹ ಅರ್ಜಿ ಸಲ್ಲಿಸಬಹುದು.

 

ವಯೋಮಿತಿ ಮತ್ತು ಅರ್ಜಿ ಶುಲ್ಕ ಹಾಗೂ ವೇತನ: ಕನಿಷ್ಟ 18 ವರ್ಷ, ಗರಿಷ್ಟ 65 ವರ್ಷ ಮೀರಿರಬಾರದು. ಹಾಗೂ ಅರ್ಜಿ ಶುಲ್ಕ 1000 ರೂ.ನಿಗದಿಪಡಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 30,000ದಿಂದ 40,000 ರೂ ವೇತನ ನಿಗದಿಯಾಗಿದೆ.

 

ಜಿಲ್ಲಾವಾರು ಹುದ್ದೆಗಳು: ಉಡುಪಿ 131,  ಉತ್ತರಕನ್ನಡ 101,  ಕೊಡಗು 100, ಕೊಪ್ಪಳ 66, ಕೋಲಾರ    137, ಗದಗ    46, ಕಲಬುರಗಿ 12, ಚಿಕ್ಕಬಳ್ಳಾಪುರ 39, ಚಿಕ್ಕಮಗಳೂರು 112, ಚಿತ್ರದುರ್ಗ 93,  ಚಾಮರಾಜನಗರ 50,  ತುಮಕೂರು 334,  ದಕ್ಷಿಣ ಕನ್ನಡ 66,  ದಾವಣಗೆರ    183, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು 65,  ವಿಜಯಪುರ 76,  ಬೆಳಗಾವಿ 112,  ಬಳ್ಳಾರಿ 27,  ವಿಜಯನಗರ 29,  ಬಾಗಲಕೋಟೆ 60,  ಬೀದರ್ 13,  ಮಂಡ್ಯ 195,  ಮೈಸೂರು 136, ಯಾದಗಿರಿ 45, ರಾಮನಗರ 155,  ರಾಯಚೂರು 54,  ಶಿವಮೊಗ್ಗ 127,  ಹಾವೇರಿ    299, ಹಾಸನ 136 ಸೇರಿ ಒಟ್ಟು 3000 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದೆ.

Notification

Notification 2


By Priya

Leave a Reply

Your email address will not be published. Required fields are marked *