ಪೂರ್ವ ರೈಲ್ವೆಯಲ್ಲಿ 3366 ಹುದ್ದೆಗಳ ಭರ್ತಿ: ಆನ್ಲೈನ್ ಅರ್ಜಿ ಆಹ್ವಾನ
ಈಸ್ಟರ್ನ್ ರೈಲ್ವೆಯಲ್ಲಿ ಅಗತ್ಯ ಇರುವ 3366 ವಿವಿಧ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳನ್ನು ಮೆಕ್ಯಾನಿಕಲ್, ವೆಲ್ಡರ್, ಇಲೆಕ್ಟ್ರಿಕಲ್, ಡ್ರಾಟ್ಸ್ಮನ್, ಫಿಟ್ಟರ್ ಸೇರಿದಂತೆ ವಿವಿಧ ಟ್ರೇಡ್ಗಳಲ್ಲಿ ನೇಮಕ ಮಾಡಲಾಗುತ್ತದೆ.
- ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 03-11-2021
ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಹತೆ : ಅರ್ಜಿ ಸಲ್ಲಿಸಲು 8ನೇ ತರಗತಿ, 10ನೇ ತರಗತಿ, ಐಟಿಐ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.