Join Our WhatsApp Group

RDPR Karnataka Recruitment 2021: 154 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 154 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಏಪ್ರಿಲ್ 28,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ನೇಮಕಾತಿ ಬಗೆಗೆ ಸಂಪೂರ್ಣ ಮಾಹಿತಿ ಪಡೆಯಲು ಮುಂದೆ ಓದಿ.

ವಿದ್ಯಾರ್ಹತೆ: ಪೋಸ್ಟ್ ಗ್ರಾಜುಯೇಟ್, ಪದವಿ, ಎಂಸಿಎ, ಎಂ.ಟೆಕ್, ಬಿ.ಇ, ಎಂ.ಎಸ್ಸಿ, ಎಂಎಸ್‌ಡಬ್ಲ್ಯೂ ಮತ್ತು ಎಂ.ಎ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

ವಯೋಮಿತಿ: ಈ ಹುದ್ದೆಗಳಿಗೆ ಗರಿಷ್ಟ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನ: ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,000/- ರಿಂದ 1,50,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅರ್ಜಿದಾರರ ಕಿರುಪಟ್ಟಿಯನ್ನು ಮಾಡಿ ನೇರ ಸಂದರ್ಶನ ಅಥವಾ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://rdpr.karnataka.gov.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಏಪ್ರಿಲ್ 28,2021ರ ಸಂಜೆ 5:30ರೊಳಗೆ ಅರ್ಜಿಯನ್ನು ತಲುಪಿಸಬೇಕಿರುತ್ತದೆ.

ಕಚೇರಿ ವಿಳಾಸ: The Commissioner, Rural drinking water and sanitation department, 2nd floor, KHB complex, Cauvery bhavan, K.G.. Road, Bengaluru-560 009.

|| Download ||

Join Our WhatsApp Group


By Priya

Leave a Reply

Your email address will not be published. Required fields are marked *