Join Our WhatsApp Group

RGUHS Recruitment 2021

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 4 ಗ್ರಂಥಾಲಯ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತರು ಏಪ್ರಿಲ್ 27,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಹತೆ: ಎಂ.ಎಲ್.ಐ.ಎಸ್ಸಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು

ಸ್ಟೈಫೆಂಡ್: ಗ್ರಂಥಾಲಯ ಟ್ರೈನಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,000/-ರೂ ಸ್ಟೈಫೆಂಡ್ ಅನ್ನು ನೀಡಲಾಗುವುದು.

ಅರ್ಜಿ ಸಲ್ಲಿಕೆ: ಆಸಕ್ತ ಅಭ್ಯರ್ಥಿಗಳು ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಏಪ್ರಿಲ್ 27,2021ರೊಳಗೆ ಸಲ್ಲಿಸತಕ್ಕದ್ದು. ಮೊಹರಾದ ಲಕೋಟೆಯ ಮೇಲೆ “ಗ್ರಂಥಾಲಯ ಟ್ರೈನಿ” ಎಂದು ನಮೂದಿಸತಕ್ಕದ್ದು ಅಥವಾ ಸ್ವ-ವಿವರಗಳನ್ನು ಇಮೇಲ್ library@rguhs.ac.in ವಿಳಾಸಕ್ಕೆ ಸಲ್ಲಿಸಬಹುದು.

ಕಚೇರಿ ವಿಳಾಸ: ನಿರ್ದೇಶಕರು, ಗ್ರಂಥಾಲಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ, 4ನೇ ಟಿ.ಬ್ಲಾಕ್, ಜಯನಗರ, ಬೆಂಗಳೂರು-560 041.


By Priya

Leave a Reply

Your email address will not be published. Required fields are marked *