RUDSETI Self Employment Training: ಸ್ವ ಉದ್ಯೋಗ ಉಚಿತ ತರಬೇತಿಗೆ ರುಡ್‌ಸೆಟ್‌ ಅರ್ಜಿ ಆಹ್ವಾನ

 

ಸ್ವ ಉದ್ಯೋಗ ಕೈಗೊಳ್ಳಲು ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾಬಿಸಿದ ರುಡ್‌ಸೆಟ್ ಉಜಿರೆ

ಡಿಸೆಂಬರ್ 28 ರಿಂದ ಆರಂಭವಾಗಲಿದೆ ವಿವಿಧ ಉಚಿತ ತರಬೇತಿ ಕಾರ್ಯಕ್ರಮ

18 ರಿಂದ 45 ವರ್ಷಗಳ ವಯೋಮಿತಿಯರು ಅರ್ಜಿ ಸಲ್ಲಿಸಲು ಅರ್ಹ

 

ಇಲ್ಲವಾದರೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಬರೆದು, ಆ ಅರ್ಜಿಯನ್ನು ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ – 574240, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ವಿಳಾಸಕ್ಕೆ ಕಳುಹಿಸಬಹುದು.  ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404 ಅಥವಾ 9591044014ಗೆ ಸಂಪರ್ಕಿಸಲು ಕೋರಲಾಗಿದೆ.

 

ಉಚಿತ ಸ್ವ ಉದ್ಯೋಗ ತರಬೇತಿಗಳ ವಿವರ ಇಂತಿದೆ
ಅಣಬೆ ಕೃಷಿ : 28.12.2021 ರಿಂದ 06.01.2022 (10 ದಿನಗಳು)
ಜೇನು ಕೃಷಿ : 06.01.2022 ರಿಂದ 15.01.2022 (10 ದಿನಗಳು)
ಗೃಹ ವಿದ್ಯುತ್ ಉಪಕರಣಗಳ ರಿಪೇರಿ : 10.01.2022 ರಿಂದ 09.02.2022 (30 ದಿನಗಳು)
ರಬ್ಬರ್ ಟ್ಯಾಪಿಂಗ್ : 19.01.2022 ರಿಂದ 28.01.2022 (10 ದಿನಗಳು)
ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ : 24.01.2022 ರಿಂದ 02.02.2022 (10 ದಿನಗಳು)
ಮಹಿಳೆಯರ ವಸ್ತç ವಿನ್ಯಾಸ : 17.01.2022 ರಿಂದ 15.02.2022 (30 ದಿನಗಳು)

 

ಮಸಾಲ ಪೌಡರ್, ಪಪ್ಪಡ್ ಮತ್ತು ಉಪ್ಪಿನಕಾಯಿ ತಯಾರಿಕೆ : 10.02.2022 ರಿಂದ 19.02.2022 (10 ದಿನಗಳು)
ಎಸಿ ಮತು ಫ್ರಿಡ್ಜ್ ರಿಪೇರಿ : 31.01.2022 ರಿಂದ 01.03.2022 (30 ದಿನಗಳು)
ಮಹಿಳೆಯರ ಬ್ಯೂಟಿ ಪಾರ್ಲರ್ : 16.02.2022 ರಿಂದ 17.03.2022 (30 ದಿನಗಳು)
ಎಲ್ಲಾ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಅಭ್ಯರ್ಥಿಗಳು ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರಬೇಕು, ಎ.ಪಿ.ಎಲ್. ಪಡಿತರ ಚೀಟಿ ಇರುವವರು, ಉದ್ಯೋಗ ಖಾತ್ರಿ ಚೀಟಿಯನ್ನು ಹೊಂದಿರಬೇಕು.

 

4 ಪೋಟೋ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ 18 ರಿಂದ 45 ವರ್ಷದೊಳಗಿನ ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ತರಬೇತಿಯ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನು ನೀಡಲಾಗುತ್ತದೆ.

 


By Priya

Leave a Reply

Your email address will not be published. Required fields are marked *